Thursday, September 15, 2011

ಮಾಡರ್ನ್ ಹರಿ


ಶೇಷ ಶಯನನೆ, ಪಾಪ
ಯಾವಾಗಲೂ ಶೇಷನ ಮೇಲೆ
ಮಲಗುವೆಯಲ್ಲಾ, ಒಮ್ಮೆ ಯೋಚಿಸು
ಅದಕೂ ಜೀವವಿಲ್ಲವೇನೋ?

ಇಷ್ಟೆಲ್ಲಾ ತರತರದ
ಹಾಸಿಗೆ ಮಂಚಗಳಿರುವಾಗ
ಅದೇನು ಹೇಸಿಗೆ ಹಾವೇ ಹಾಸಿಗೆ
ಅದರ ಮೇಲೆ ಕರುಣೆ ಇಲ್ಲವೇನೋ?
 
ಲಕ್ಷ್ಮಿಯ ಕೈ ನೋಯದೇನೋ
ಒತ್ತಿ ಒತ್ತಿ ನಿನ್ನ ಕಾಲ
ನಾಲ್ಕು ದಿವಸ ರಜೆ
ಅವಳಿಗೂ ಕೊಡಬಾರದೇನೋ?

ಅಲ್ಲಲ್ಲಿ ನೋಡಲ್ಲಿ ಕಾಣಿಸದೆ
ಪಾರ್ಲರುಗಳು ಮಸ್ಸಾಜು
ಸೆಂಟರುಗಳು ಈ ಕಾಲದಲ್ಲೂ
ಅವಳಿಗೆ ಸುಖ ಬೇಡವೇನೋ?

ವಾಕಿಂಗು ಜಾಗಿಂಗು ರನ್ನಿಂಗು
ಒಂದೂ ಇಲ್ಲದೆ ಹಾಗೆ ಇರುವೆಯಲ್ಲಾ
ಬೊಜ್ಜು ಬಂದರೆ ಲಕುಮಿ
ಸಿಡುಕುವುದಿಲ್ಲವೇನೋ?

ಸಾಗರವ ಬಿಟ್ಟು ಭುವಿಗಿಳಿದು ಬಾ
ಇಲ್ಲಿ ಮೈದಾನವಿಲ್ಲ ರಸ್ತೆಯಲ್ಲೇ
ಜಾಗಿಂಗು ವಾಕಿಂಗು ಮಾಡಿ
ಜಿಮ್ಮುಗಳಲ್ಲಿ ಮೆಂಬರ್ ಆಗ್ಬಾರದೇನೋ?

ಬ್ರಹ್ಮನನು ನಾಭಿಯ
ಕಮಲದ ಮೇಲೆ ಕೂರಿಸಿಕೊಂಡೆ,
ನಿನ್ನೊಂದಿಗೆ ಏಕಾಂಗಿತನ
ಲಕುಮಿಗೆ ಬೇಡವೇನೋ?

ಸಿಂಗಲ್ ಫ್ಲೋರಿನ ಫ್ಲಾಟಲ್ಲಿ
ಲಕುಮಿಯೊಂದಿಗೆ ಸಂಸಾರ
ಮಾಡಿ ಮಾಡರ್ನ್ ಹರಿ
ನೀನಾಗಬಾರದೇನೋ?


ಸರ್ಕಾರಿ ಕೆಲಸವೂ ಸಿಗಬಹುದು
ಪ್ರೈವೆಟಲ್ಲೂ ದುಡ್ಡಿದೆ
ಏನೂ ಇಲ್ಲದಿದ್ದರೆ
ರಾಜಕೀಯ ನೀ ಮಾಡಬಾರದೇನೋ?

(ಲಕ್ಷ್ಮಿವೆಂಕಟರಮಣನಲ್ಲಿ ಕ್ಷಮೆ ಕೋರಿ...........)

27 comments:

 1. ಪ್ರವೀಣ್;ನಿಮ್ಮ ಯೋಚನಾ ಲಹರಿ ಮೆಚ್ಚುಗೆಯಾಯಿತು.ಕವನ ಚೆನ್ನಾಗಿ ಮೂಡಿಬಂದಿದೆ.ಇನ್ನಷ್ಟು ಕವನಗಳು ಬರಲಿ.ಧನ್ಯವಾದಗಳು.

  ReplyDelete
 2. ಸಿಂಗಲ್ ಫ್ಲೋರಿನ ಫ್ಲಾಟಲ್ಲಿ
  ಲಕುಮಿಯೊಂದಿಗೆ ಸಂಸಾರ
  ಮಾಡಿ ಮಾಡರ್ನ್ ಹರಿ
  ನೀನಾಗಬಾರದೇನೋ?


  ಇಸ್ಟವಾದ ಸಾಲುಗಳು....ಹಾಂ ಎಂದು ಮಾತು ,ನಮ್ಮಲ್ಲಿಗೆ ಬರುವುದಕ್ಕಿಂತಾ ಮುಂಚೆ ವೀಸಾ ಸರಿಯಾಗಿ ಪರಿಶೀಲಿಸಲು ಹೇಳಿ... ಆಮೇಲೆ ಲಕ್ಷ್ಮಿ ದೇವಿಯ ಓಡವೆಗಳ ಬಗ್ಗೆ ಮೊದಲೇ ಕಸ್ಟಮ್ಸ್ ಡಿಪಾರ್ಟ್ ಮೆಂಟ್ ಗೆ ಹೇಳಿರಿ.. ಆಮೇಲೆ

  ReplyDelete
 3. ವಿಡಂಬನೆ ಸೊಗಸಾಗಿದೆ ಪ್ರವೀಣು....

  ReplyDelete
 4. ಕವಿತೆ ಸುಪ್ರಿಯವಾಯಿತು ಸರ್.ಜೈ ಹೋ

  ReplyDelete
 5. ಸರ್ಕಾರಿ ನೌಕರಿ, ಪ್ರೈವೇಟು ಛೋಕರಿ ಎರಡೂ ಇಲ್ಲದಿದ್ದರೆ ಆಗು ನೀ ರಾಜಕೀಯ ಪೋಕರಿ.....ಹಹಹಹ ಏನು ವೈನಾಗಿ ಓಡ್ಸಿದ್ದೀಯಲ್ಲೋ ಬಡ್ಡೆತ್ತದೇ...ಅಲ್ ಕಲಾ ಎಂಗ್ಲಾ ಓಡಿಸ್ದೆ ನಿನ್ಬುದ್ದಿಯಾ ಸಾಗ್ರದ್ಕಡೀಕ್ಕೆ...ಅದೂ ..ನಾರಾಯಣ ನಾರಾಯಣನ್ಕಡೀಕ್ಕೆ...ಲಚ್ಮಕ್ಕ ಪೊರ್ಕೆ ಎತ್ಕೊಂಡ್ಡಾಳು ನನ್ಗಂಡ್ನೇನ್ಲಾ ಅಂದೆ ಬಡ್ಡೆತ್ತಾದೇ ಅಂತ......ಹಹಹಹ
  ಸೂಪರ್..ಪ್ರವೀಣಾ..ಬಹಳ ಚನ್ನಾಗಿದೆ..ವಿವಿಧ ವರಸೆ...
  ನಾರಾಯಣ ನಾರಾಯಣ....

  ReplyDelete
 6. ANANTA PADMANAABHA MODALE KOPAGONDIDDAANE, HUSHAARU !!

  ReplyDelete
 7. ಚೆನ್ನಾಗಿದೆ ನಿಮ್ಮ , ಹರಿ ಹರಟೆ

  ReplyDelete
 8. ಗುರುಗಳೇ,
  ಧನ್ಯವಾದಗಳು,
  ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇದ್ದರೆ ಖಂಡಿತಾ ಬರೆಯುವೆ,

  ReplyDelete
 9. ಚಿನ್ಮಯ್,
  ನೀವು ಹೇಳಿದಂತೆ ಅವರಿಗೆ ಹೇಳುವೆ!!!
  ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 10. ಪ್ರಕಾಶಣ್ಣ,
  ಪ್ರತಿಕ್ರಿಯೆಗೆ ಧನ್ಯವಾದಗಳು

  ReplyDelete
 11. ಬಾಲು ಸರ್,
  ಹೌದಾ????
  ಧನ್ಯವಾದಗಳು.

  ReplyDelete
 12. ಅಜಾದ್ ಸರ್ ಪ್ರತಿಕ್ರಿಯೆಗೆ ಧನ್ಯವಾದಗಳು.,
  ನಾರಾಯಣನ ಬಗ್ಗೆ ಬರೆಯಲು ನಾರ(ಅಜಾ)ದರೆ ಪ್ರೋತ್ಸಾಹ!!!!!
  ಲಚ್ಚಕ್ಕನಿಗೆ ನೀವೇ ಬುದ್ಧಿ ಹೇಳ್ಬಿಡಿ !

  ReplyDelete
 13. ಮಹೇಶ್ಅಣ್ಣ,
  ಥ್ಯಾಂಕ್ ಯೂ............

  ReplyDelete
 14. ವಿ ಆರ್ ಭಟ್ ಸರ್,
  ಅನಂತಪದ್ಮನಾಭನಿಗೆ ಬೇಸರವಿಲ್ಲಂತೆ, ನಾನು ಹೇಳಿದಂತೆ ಆಲೋಚನೆ ಮಾಡುತ್ತಿದ್ದನಂತೆ, ನಿನ್ನೆ ಫೋನ್ ಬಂದಿತ್ತು!!!!!!
  ಹ್ಹ ಹ್ಹ ಹ್ಹಾ.....ಧನ್ಯವಾದಗಳು ಸರ್.

  ReplyDelete
 15. nimma kavanana lakshmi odidare munisikondu bhulokakke bandubidtaa iddalu.kshame koriddiralla bachaav aadiri bidi.

  ReplyDelete
 16. ಕಲರವ,
  ಲಕ್ಷ್ಮಿ ಬಂದರೆ ಬರಲಿ ಬಿಡಿ, ನಮ್ಮ ದಾರಿದ್ರ್ಯವಾದರೂ ಕಡಿಮೆಯಾದೀತು!
  ಹ್ಹ ಹ್ಹ ಹ್ಹಾ........
  ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.

  ReplyDelete
 17. ದಿನಕರ ಸರ್,
  ನಮ್ಮದು ಅಪರೂಪದ ಬರವಣಿಗೆ ಹಾಗೆ ನಿಮ್ಮ ಅಪರೂಪದ ಭೇಟಿ!
  ಧನ್ಯವಾದಗಳು.

  ReplyDelete
 18. Devre!!! hingella bardu last alli Kshame irli bere he he he very creative :D

  ReplyDelete