Thursday, November 18, 2010

ವಿಪರ್ಯಾಸ.........

ಗೆಳತಿ,
ಹೂವಾಗಿ, ಹಣ್ಣಾಗಿ
ಕನಸಾಗಿ, ಕಣ್ಣಾಗಿ
ಹಿತದ ಗೆಳತಿಯಾಗಿ
ನನಗೆಲ್ಲಾ ನೀನಾಗಿ
 ದೇವತೆಯಾಗಿ 
ನನ್ನ ಮನದಲ್ಲಿ ನೀನಿದ್ದೆ............


ಆ ಒಂದು ಕ್ಷಣ
ಬಿಟ್ಟೆ ಎಲ್ಲಾ ಚಿಂತೆ
ಬಾಳ ಗುರಿಯ ಕತೆ
ಭವಿಸಿದ ಎಲ್ಲಾ ವ್ಯಥೆ
ಕೊನೆಗೆ ನನ್ನನ್ನೇ ಮರೆತೆ
ಆದರೂ
ಕೆಡಿಸಿ ಬಿಟ್ಟೆಯಲ್ಲೆ ನೀ ನಿದ್ದೆ.............!ಸ್ನೇಹಿತರೇ,
ಬ್ಲಾಗ್ ಲೋಕದಿಂದ ದೂರ ಉಳಿದು ತುಂಬಾ ದಿನಗಳಾದವು. ಎಂದೋ ಗೀಚಿದ್ದ ಈ ಸಾಲುಗಳು ಇಂದು ನೆನಪಾಗಿ ನಿಮ್ಮ ಮುಂದಿಟ್ಟಿದ್ದೇನೆ.
ಈ ಮಧ್ಯೆ ದೀಪಾವಳಿ ಬಂದು ಹೋಯಿತು, ಕನ್ನಡ ರಾಜ್ಯೋತ್ಸವ ಆಚರಣೆಯಾಯ್ತು, ಆದರೂ ನನ್ನ ಬ್ಲಾಗ್ ಮನೆಯ ಶೃಂಗಾರವಿಲ್ಲ, ತಳಿರು ತೋರಣಗಳಿಲ್ಲ. ಹಬ್ಬವಿಲ್ಲ, ನಿಮಗೆಲ್ಲ ಶುಭಾಷಯಗಳನ್ನೂ ಹೇಳಲಿಲ್ಲ. ಯಾರ ಮನೆಗೂ ಭೇಟಿಯಿಲ್ಲ, ನಿಮ್ಮ ಬರಹಗಳನ್ನೆಲ್ಲ ಓದಲೂ ಇಲ್ಲ.
ಹೌದು ನಾನು ತಪ್ಪು ಮಾಡಿದ್ದೇನೆ. 
ಆದರೆ ಏನು ಮಾಡುವುದು ಹೇಳಿ, ಕೆಲಸದ ಒತ್ತಡ ಅದೆಷ್ಟಿದೆಯೆಂದರೆ ಊಟ ನಿದ್ದೆಗೂ ಸಮಯವಿಲ್ಲ. ಹೊತ್ತು ಗೊತ್ತೆಂಬುದಿಲ್ಲ. ಹೊಸದಾಗಿ ಆರಂಭಗೊಂಡ 3 ತಾರಾ ಹೋಟೆಲ್ಲಿನ ಸಂಪೂರ್ಣ ಜವಬ್ದಾರಿ ನನಗೆ ಸಿಕ್ಕಿದ್ದರ ಕೊಡುಗೆ ಇದು! ಕೋಟ್ಯಾಂತರ ಖರ್ಚು ಮಾಡಿ ಪ್ರಾರಂಭಿಸಿದ ಈ ಹೋಟೆಲ್ಲನ್ನು ಮಗುವಿನಂತೆ ಜೋಪಾನ ಮಾಡುವುದು ನಮ್ಮ ಕರ್ತವ್ಯ ಅಲ್ಲವಾ? ಮಗು ಬೆಳೆದು ದೊಡ್ಡದಾದ ಮೇಲೆ ಹೊಣೆಗಾರಿಕೆ ಸ್ವಲ್ಪ ಕಡಿಮೆಯಾಗುತ್ತದೆ. ಹಾಗೆ ಇದೂ ಕೂಡ!
ಆಗೊಮ್ಮೆ ಈಗೊಮ್ಮೆ ಅಲ್ಲಲ್ಲಿ ಇಣುಕಿ ಹೋಗುತ್ತಿದ್ದೇನೆ. ಆದಷ್ಟು ಬೇಗ ಸಮಯ ಮಾಡಿಕೊಂಡು ಎಲ್ಲರ ಮನೆಗೂ ಬಂದು ತರ್ಲೆ ಮಾಡುತ್ತಾ ಇರುತ್ತೇನೆ! ಉದಾಹರಣೆಗೆ 
ತಡವಾಗಿ ಮತ್ತು ಮುಂದಿನ ವರ್ಷಕ್ಕೆ ಮುಂಗಡವಾಗಿ ದೀಪಾವಳಿಯ ಮತ್ತು ಕನ್ನಡ ರಾಜೋತ್ಸವದ ಶುಭಾಷಯಗಳು!

ಅಲ್ಲಿಯವರೆಗೂ ಪ್ರೀತಿ ಮಮತೆ ಇಂದಿನಂತೆಯೇ ಇರಲಿ!
ನಿಮ್ಮವ........
ಮನದಾಳದಿಂದ.....   ಪ್ರವೀಣ್....

18 comments:

 1. It is nice to see you in the blog again.kindly visit my blog.Best wishes.

  ReplyDelete
 2. ಪ್ರವೀಣ್...

  ಕವನ ತುಂಬಾ ಚೆನ್ನಾಗಿದೆ..
  ಅಭಿನಂದನೆಗಳು...

  ನಿದ್ದೆ ಕೆಡಿಸಿದ ಹುಡುಗಿ ಬಾಳ ಸಂಗಾತಿಯಾಗಲಿ..

  " ಮೊದಲು ಅನ್ನ..
  ಆಮೇಲೆ ಆನಂದ.."

  ನಮಗ್ಯಾರಿಗೂ ಬೇಸರವಿಲ್ಲ..
  ಹೊಟೆಲ್ಲನ್ನು ಚೆನ್ನಾಗಿ ವ್ಯವಸ್ಥೆ ಮಾಡಿರಿ..
  ಡಿಸೆಂಬರಿನಲ್ಲಿ ನಾವು ಬಂದು ನಿಮ್ಮ ಕಾರ್ಯ ವೈಖರಿ ಪರಿಶೀಲನೆ ಮಾಡುತ್ತೇವೆ...

  ಜೈ ಹೋ...

  ReplyDelete
 3. ಪ್ರವೀಣ್ ಉದ್ಯೋಗಂ ಸ್ತ್ರೀ-ಪುರುಷ ಲಕ್ಷಣಂ !ಕವನ ಓಕೆ,ನೀವು ಕೆಲಸ ಬಿಟ್ಟು ಬರಬೇಕು ಯಾಕೆ? ನಿಮ್ಮ ಕೆಲಸ ಸಾಗಲಿ ಮುಂದೆ, ಬರೆಯುವುದು ಇದ್ದೇ ಇದೆಯಲ್ಲ, ನಿಮಗೂ ಅಡ್ವಾನ್ಸ್ ಆಗಿ ಶುಭಾಶಯಗಳು, ನಿಮ್ಮ ಹೋಟೆಲಿನಲ್ಲಿ ೨೦೧೨ ನೇ ಇಸವಿಗೆ ಕನ್ನಡ ರಾಜ್ಯೋತ್ಸವ ಆಚರಿಸಲು ಬರುವವರಿಗೆ ಈಗಲೇ ರೂಂ ಕಾದಿರಿಸಿಬಿಡಿ. ಜೈ ಹೋ !

  ReplyDelete
 4. ಕವನ ಚೆನ್ನಾಗಿದೆ ಪ್ರವೀಣ.
  ನಿಮ್ಮ ಹೊಸ ಕೆಲಸದ ಒತ್ತಡ ಬೇಗ ಕಳೆಯಲಿ ಮತ್ತು ಅದರಲ್ಲಿ ತಮೆಗೆ ಅಪಾರ ಯಶಸ್ಸು ಹರಿಯಲಿ.
  ಜೈ ಹೋ!

  ReplyDelete
 5. ಚ೦ದದ ಕವನ...:)

  ನಿಮಗೂ ಕಳೆದ, ಬರುವ ಎಲ್ಲಾ ಹಬ್ಬಗಳಿಗೂ ಶುಭಾಶಯಗಳು.
  ಜೀವ ಗಟ್ಟಿಯಿದ್ದರೆ ಭಾವ ಸೆಲೆ...
  ಅಲ್ ದಿ ಬೆಸ್ಟ್.

  ReplyDelete
 6. ಪ್ರವೀಣ ಯಾಕೆ ಕಾಣ್ತಾ ಇಲ್ಲ?-ಅಂತ ಅನ್ನಕೋತಾ ಇದ್ದೆ. ನೀವು ತಾರಾಲೋಕದಲ್ಲಿ ಇದ್ದದ್ದು ಈಗ ತಿಳಿಯಿತು. ನಿಮಗೆ ಅಲ್ಲಿ ಯಶಸ್ಸನ್ನು ಬಯಸುತ್ತೇನ. ನಿಮ್ಮ ಕವನದ ತಾರೆಯೂ ನಿಮಗೆ ಸಿಗಲಿ ಎಂದು ಹಾರೈಸುತ್ತೇನೆ.

  ReplyDelete
 7. ಪ್ರವೀನ್ ಕವನ ಚೆನ್ನಾಗಿದೆ..
  ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗಲಿ ಅಂತ ಹಾರೈಸುವೆ.

  ReplyDelete
 8. Nice lines and nice to see(read)u again again Pravin.
  sleep well n work well:-)
  Advance wishes to u also :-)

  ReplyDelete
 9. ಪ್ರವೀಣ್, ನಿಮ್ಮ ಮದುವೆ ಯಾವಾಗಲೋ ಗೊತ್ತಿಲ್ಲ ಆದರೆ ಈಗಲೇ ಶುಭಾಷಯ ತಿಳಿಸಿ ಬಿಡಲೇ....? ಹ್ಹ ಹ್ಹ ಹ್ಹ ಹ್ಹಾ ....!

  ಚಂದದ ಲೇಖನದಲ್ಲೊಂದು ಕವನ ಹ್ಞೂ.... ಚೆನ್ನಾಗಿದೆ ... ಚೆನ್ನಾಗಿದೆ.

  ಈ ಲೇಖನ ಅಲ್ಲ ಕವನ ಓದಿದ ಮೇಲೆ ನಿದ್ದೆ ಕೆಡಿಸಿಕೊಳ್ಳುವ ಸರದಿ ಪ್ರಕಾಶ್ ಹೆಗ್ಡೆ ಅವರದು, ಯಾಕೆಂದರೆ ಅವರೇ ತಾನೇ ನಿಮಗೆ ತಕ್ಕ ಹುಡುಗಿಯನ್ನು ಹುಡುಕಬೇಕಾದ್ದು....! :) :)

  ReplyDelete
 10. ayya, bhagavantha dinada 24 ganteyalli eradu uoota ondu nidre ondu snana. intha jeevanakke yakappa tension[tamashege]
  nimma hosa kelasakke all the best! my suggestion job first!

  ReplyDelete
 11. ಪ್ರವೀಣ್,
  ತುಂಬಾ ದಿವಸ ಆದ ಮೇಲೆ ನಿಮ್ಮ ಕಂಡು ಸಂತಸವಯ್ತು..
  ನಿಮ್ಮ ಹೋಟೆಲ್ ಹೆಸರು ಮಾಡಲಿ..

  ReplyDelete
 12. ತಡವಾಗಿ ಪ್ರಕಟಿಸಿದರು ಕವನ ತುಂಬಾ ಚೆನ್ನಾಗಿದೆ ಪ್ರವೀಣ್ ಸರ. ನಿಮಗೂ ಸಹ ಮುಂಗಡವಾಗಿ ದೀಪಾವಳಿಯ ಮತ್ತು ಕನ್ನಡ ರಾಜೋತ್ಸವದ ಶುಭಾಷಯಗಳು..

  ವಸಂತ್

  ReplyDelete
 13. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.......
  ಕೆಲಸದ ಒತ್ತಡದಿಂದಾಗಿ ನಿಮ್ಮ ಪ್ರತಿಕ್ರಿಯೆಗಳಿಗೆ ಉತ್ತರಿಸಲು ತಡವಾಯಿತು, ದಯವಿಟ್ಟು ಕ್ಷಮಿಸಿ.....
  ನಿಮ್ಮೆಲ್ಲರ ಪ್ರೊತ್ಸಾಹ ಹೀಗೆ ಇರಲಿ......

  ReplyDelete
 14. ಪ್ರವೀಣ್
  ಕೆಡಿಸಿ ಬಿಟ್ಟೆಯಲ್ಲೆ ನೀ
  ನಿದ್ದೆ
  ಅದೇ ಕೆಡಿಸಿಬಿಟ್ಟೆಯಲ್ಲೆ
  ನೀನಿದ್ದೆ
  ....ಎರಡಕ್ಕೂ ಹ್ಯಾಗೆ ಅರ್ಥಗಳ ತಿಕ್ಕಾಟ,,,ಹಹಹಹ್ ಚನ್ನಾಗಿದೆ honey-ಕವನ

  ReplyDelete
 15. All the best.

  ನಿಮ್ಮ ಬ್ಲಾಗ್ ಕೂಡ ಮಲೆನಾಡಿನಂತೆಯೇ ಇದೆ. ಹಸಿರು ಮತ್ತು ಫ್ರೆಶ್. ನೆಟ್ಟಿ ಓದ್ತಾ ಇದ್ದೆ. ನಮ್ಮೂರಲ್ಲಿ ಟಿಲ್ಲರ್ ಬಂದು ಬಹಳ ವರ್ಷ ಆಯ್ತು. ಎತ್ತು, ಕೋಣಗಳು ಕಡಿಮೆ. ಈಚೆಗೆ ನಾಟಿ ಮಾಡಲು, ಗದ್ದೆ ಕುಯ್ಯಲು ಜನ ಸಿಗದೇ ನಾಟಿ ಯಂತ್ರ ಕುಯಿಲು ಯಂತ್ರ ಒಕ್ಕುವ ಯಂತ್ರಗಳು ಬಂದಿವೆ. ಬೆಣವೆ ಮೇಲೆ ಹತ್ತಿ, ಕೂತು ಮಲಗಿ, ಕಾಲೆಲ್ಲ ಒಡೆದರೂ ಆಟ ನಿಲ್ಲುತಿರಲಿಲ್ಲ. ರಾತ್ರಿ ೧೨ - ೧ ರ ವರೆಗೂ ಒಕ್ಕಲಾಟ ನಡೆವ ದಿನಗಳು ಇನ್ನಿಲ್ಲ. ರೋಣುಗಲ್ಲು ಮೂಲೆ ಸೇರಿದೆ.

  ಬ್ಲಾಗ್ ತುಂಬಾ ಚೆನ್ನಾಗಿದೆ. ಥ್ಯಾಂಕ್ಸ್ :)

  ReplyDelete
 16. ಕವನ ತುಂಬಾ ಚೆನ್ನಾಗಿದೆ ಪ್ರವೀಣ್ ಸರ್.....
  ನಿಮಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು......

  ವಸಂತ್

  ReplyDelete
 17. ಅಜಾದ್ ಸರ್, ಭಾಶೇ, ವಸಂತ್ ನಿಮ್ಮೆಲ್ಲರ ಪ್ರತಿಕ್ರಿಯೆಗೆ ಧನ್ಯವಾದಗಳು.....

  ReplyDelete