Tuesday, April 27, 2010

ಚಿರಋಣಿ ನಿಮ್ಮೆಲ್ಲರಿಗೂ.........

ಸ್ನೇಹಿತರೆ,
        ನಿಮ್ಮೆಲ್ಲರಿಗೂ ಹೇಗೆ ಕೃತಜ್ಞತೆ ಸಲ್ಲಿಸಲೋ ನಾನರಿಯೆ...
ಅಮ್ಮನಿಗೆ ಅಪಘಾತವಾಗಿ ದಿಕ್ಕೇ ತೋಚದಂತಾಗಿದ್ದ ಸಂದರ್ಭದಲ್ಲಿ ಮನಸ್ಸು ತಡೆಯಲಾರದೆ
ನಿಮ್ಮೊಂದಿಗೆ ಹಂಚಿಕೊಂಡಿದ್ದೆ. ಅದರ ಮರುದಿನವೇ ಮನೆಗೆ ಹೋಗಿದ್ದರಿಂದ ಇಂದಿನವರೆಗೂ
ಗಣಕಯಂತ್ರವನ್ನು ಮುಟ್ಟಿರಲಿಲ್ಲ. ಆದರೆ ಇಂದು ಬ್ಲಾಗ್ ತೆರೆದ ನನಗೆ ನಿಮ್ಮೆಲ್ಲರ ಹಾರೈಕೆ ಕಾದಿತ್ತು.


        ನಿಜವಾಗಿಯೂ ನಿಮ್ಮೆಲ್ಲರಿಗೂ ನಾನು ಚಿರಋಣಿ. ನಿಮ್ಮೆಲ್ಲರ ಹಾರೈಕೆಯಿಂದ ನನ್ನಮ್ಮ
ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಯ ಹಾಸಿಗೆ ಬಿಟ್ಟು ಮನೆಯಲ್ಲಿ ಓಡಾಡಿಕೊಂಡಿದ್ದಾರೆ. ದೇವರ
ದಯೆಯಿಂದ ಅಮ್ಮನ ಮುಖ ನಗುಮೊಗದಿಂದ ಕೂಡಿದೆ.


        ಆದರೆ ಅಮ್ಮನ ಹಠ ಮಾತ್ರ ಕಡಿಮೆಯಾಗಲಿಲ್ಲ! ತಲೆಗೆ ಸ್ನಾನ ಮಾಡಬೇಡ ಎಂದು ಎಷ್ಟು 
ಹೇಳಿದರೂ ಕೇಳದೆ ಗಾಯದ ಹೊಲಿಗೆ ಬಿಚ್ಚಿದ ಮರುದಿನವೇ ನಮಗ್ಯಾರಿಗೂ ತಿಳಿಯದಂತೆ ತಲೆಗೆ
ನೀರು ಹಾಕಿಕೊಂಡೇ ಬಿಟ್ಟರು! ಇನ್ನು ಸುಮ್ಮನೆ ಕೂರುವ ಜಾಯಮಾನವಂತೂ ಅಲ್ಲವೇ ಅಲ್ಲ!
 ಅಲ್ಲಿ ಇಲ್ಲಿ ಓಡಾಡುತ್ತಾ, ಒಂದೇ ಕೈಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಾ ಇರುತ್ತಾಳೆ. ಸುಮ್ಮನೆ
ಮಲಗಿಯೋ, ಕುಳಿತೋ ಇರು ಅಂದ್ರೆ ಕೇಳುವುದೇ ಇಲ್ಲ. ಹಗಲು ರಾತ್ರಿಯೆನ್ನದೆ ಸಂಸಾರಕ್ಕಾಗಿ ದುಡಿದ
 ಜೀವ ಒಂದು ಗಳಿಗೆ ಕೂರುವುದೆಂದರೆ ಹಿಂಸೆ ಪಡುತ್ತದೆ. ಅಂತೂ ಗುಣವಾಗುವ ಹಂತದಲ್ಲಿದ್ದಾರೆ.
ನಂಬಿದ ದೇವರು ಖಂಡಿತ ಕೈ ಬಿಡುವುದಿಲ್ಲ ಎಂಬ ನಂಬಿಕೆಯಿಂದ ದೇವರ ಮೇಲೆ ಭಾರ ಹಾಕಿ
ಬಂದಿದ್ದೇನೆ.


       ನಿಮ್ಮೆಲ್ಲರ ಬ್ಲಾಗ್ ಕಡೆ ಮುಖ ಹಾಕಿ ತುಂಬಾ ದಿನಗಳಾದವು. ಈಗ ಖಂಡಿತಾ ನಿಮ್ಮ
 ಮನೆಗೆ ಬರುತ್ತೇನೆ. ಸಾಹಿತ್ಯದ ಭೋಜನವನು ಉಣ್ಣುತ್ತೇನೆ. ನಿಮ್ಮ ಸಲಹೆಗಳ ರೂಮಿನಲ್ಲಿ 
ಉಳಿಯುತ್ತೇನೆ. 


     ನಿಮ್ಮವ
       ಪ್ರವೀಣ್ (ಮನದಾಳದಿಂದ) 

12 comments:

 1. ಪ್ರವೀಣ್...

  ಕಾಣದ ದೇವರು..
  ಕಣ್ಣೆದುರಿಗಿನ ದೇವರನ್ನು ಕಾಪಾಡಿದ್ದಾನೆ..!

  ನಿಜಕ್ಕೂ ದೇವರು ದೊಡ್ಡವನು..

  ನಿಮ್ಮ ಅಮ್ಮನನ್ನು
  ಇನ್ನೂ ಅಕ್ಕರೆಯಿಂದ..
  ಪ್ರೀತಿಯಿಂದ ನೋಡಿಕೊಳ್ಳಿ...
  ಅವರು ನಿಮ್ಮ ಅದೃಷ್ಟ..
  ಭಾಗ್ಯ...
  ನಿಮ್ಮ ಪಾಲಿನ ದೇವರು...

  ಅಮ್ಮ ಗುಣ ಮುಖರಾಗುತ್ತಿದ್ದಾರಲ್ಲ... !
  ನಿಮ್ಮ ಖುಷಿಯಲ್ಲಿ ನಾವೂ ಸಹ ಭಾಗಿ !

  ReplyDelete
 2. amma gunamukharaaguttiruvada keli sa0toshavaayitu. neevu blog-ge bandiddu santoshavaayitu.

  ReplyDelete
 3. ಪ್ರಕಾಶಣ್ಣ,
  ದನ್ಯವಾದಗಳು.
  ನಿಜ ನೀವು ಹೇಳಿದಂತೆ ಅಮ್ಮ ಕಣ್ಣೆದುರಿನ ದೇವರು. ಆ ದೇವರನ್ನು ಚನ್ನಾಗಿ ನೋಡಿಕೊಂಡರೆ ಕಣ್ಣಿಗೆ ಕಾಣದ ದೇವರು ಒಳ್ಳೆಯದನ್ನೇ ಮಾಡ್ತಾನೆ ಅಲ್ವಾ?
  ನನ್ನ ನೋವು-ಖುಷಿಗೆ ಸ್ಪಂದಿಸಿದಕ್ಕ್ಕೆ ಧನ್ಯವಾದಗಳು.

  ReplyDelete
 4. ಸೀತಾರಾಂ ಸರ್,
  ಧನ್ಯವಾದಗಳು.
  ಸ್ವಲ್ಪ ದಿನ ಬ್ಲಾಗ್ ಲೋಕದ ಕಡೆ ಬಂದಿರಲಿಲ್ಲ. ಇನ್ನು ಖಂಡಿತ ಬರುತ್ತಿರುತ್ತೇನೆ.

  ReplyDelete
 5. ನಿಮ್ಮ ಅಮ್ಮ ಗುಣಮುಖರಾಗಿದ್ದನ್ನು ಕೇಳಿ ನಿಜಕ್ಕೂ ಸಂತೋಷವಾಯ್ತು. ದೇವರು ದೊಡ್ಡವನು. ದೇವರ ರಕ್ಷೆ ಸದಾ ನಮ್ಮೆಲ್ಲರ ಮೇಲಿರಲಿ.

  ReplyDelete
 6. ನಿಮ್ಮ ಅಮ್ಮ ಗುಣಮುಖರಾದ ವಿಷಯ ಕೇಳಿ ನಿಜಕ್ಕೂ ತುಂಬಾ ಸಂತೋಷವಾಯ್ತು. ದೇವರ ಕೃಪೆ ಸದಾ ನಮ್ಮೆಲ್ಲರ ಮೇಲಿರಲಿ.

  ReplyDelete
 7. "ಅಮ್ಮ"
  ಜೀವನದಲ್ಲಿ ಎಲ್ಲರಿಗೂ ಒಂದು ಅಪೂರ್ವವಾದ ಅನುಭವ.
  ಅನುದಿನವೂ ಅನುಭವಿಸಿ.
  ಅನುಭವಕ್ಕೆ ಅವರಿರಲಿ ಎಂದೆಂದೂ..

  ReplyDelete
 8. ಪ್ರವೀಣ್ ತಾಯನ್ನು ಗೌರವ ಆದರ ಕಾಳಜಿಯಿಂದ ನೋಡಿಕೊಳ್ಳುವವರಿಗೆ ದೇವರು ಸಹಾಯ ಮಾಡುತಾನಂತೆ ...ನಿಮ್ಮ ವಿಷಯದಲ್ಲೂ ಹಾಗೇ ಆಗಿದೆ..ನಿಮ್ಮ ಅಮ್ಮನ ಆರೋಗ್ಯ ಮತ್ತೂ ಹಾಸನಾಗಲಿ, ನಿಮ್ಮೆಲ್ಲರೊಂದಿಗೆ ನಗು ನಗುತಾ ಚಟುವಟಿಕೆಗಳ ಚಿಲುಮೆಯಾಗಿ ಸದಾ ನಿಮಗೆ ದಾರಿದೀಪವಾಗಲಿ ಎಂದು ಹಾರೈಸುತ್ತೇನೆ.

  ReplyDelete
 9. ನಿಮ್ಮ ಮೊದಲಿನ ಬ್ಲಾಗ್ ನಾನು ನೋಡಿರಲಿಲ್ಲ, ಅದಕ್ಕೆ ನನಗೆ ವಿಷಯ ಗೊತ್ತಾಗಲಿಲ್ಲ. ಇರಲಿ, ನಿಮ್ಮ ತಾಯಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಓದಿ ಸಂತೋಷವಾಯಿತು. ಒಂದು ರೀತಿಯಲ್ಲಿ ಅವರು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರೆ ಒಳ್ಳೆಯದೆ. ಏನಾದರೂ ದೈಹಿಕ ನೋವು ಇದ್ದರೆ ಅದು ಬೇಗ ಮರೆಯುತ್ತಾರೆ ಆ ವೇಳೆಯಲ್ಲಿ. ತುಂಬಾ ಶ್ರಮದಾಯಕವಾಗಿರಬಾರದು, ಅಷ್ಟೆ.

  ReplyDelete
 10. ಓ ಮನಸೇ...........
  ತಾಯಿಯ ಮಮತೆ ಬೇರೆಲ್ಲಿಂದಲೂ ದೊರೆಯುವುದಿಲ್ಲ. ಅಮ್ಮನಿಗೆ ನೋವಾದಾಗ ನಮಗೆ ಕಣ್ಣೀರು ಸಹಜ ಅಲ್ವಾ?
  ನಿಮ್ಮೆಲ್ಲರ ಹಾರೈಕೆ ಎಂದೆಂದಿಗೂ ಸುಳ್ಳಾಗದು.
  ನಿಮ್ಮ ಪ್ರತಿಕ್ರಿಯೆಗೆ ದನ್ಯವಾದಗಳು.

  ReplyDelete
 11. ವೆಂಕಟಕೃಷ್ಣ ಅವರೇ,
  ಅನುದಿನವೂ ಅನುಭವಿಸಲೇ ಬೇಕಾದ ಸುಖ ಆ "ಅಮ್ಮ" ಎಂಬ ಎರಡಕ್ಷರ. ಆದರೆ ಆ ಎರಡ್ಕ್ಷದ ಮಹತ್ವ ಮಾತ್ರ ಆಕಾಶದಷ್ಟೇ ವಿಶಾಲ.
  ದನ್ಯವಾದಗಳು.

  ReplyDelete
 12. ದೀಪಸ್ಮಿತಾ.......

  ಮತ್ತೆ ಎಲ್ಲಿಯಾದರೂ ನೋವು ಮಾಡಿಕೊಲ್ಲುತ್ತರೆನೋ ಎಂಬ ಭಯ ಅಷ್ಟೇ.
  ಮತ್ತೆ ಸುಮ್ಮನೆ ಕೂರುವ ಜಾಯಮಾನವಂತು ಅಮ್ಮನದು ಅಲ್ಲವೇ ಅಲ್ಲ! ನಮ್ಮಲ್ಲಿ ಈಗಂತೂ ಕೆಲಸ ಜಾಸ್ತಿ. ಆಲೆಮನೆ, ಕಬ್ಬು ನೆಡುವುದು, ಗದ್ದೆ ಕೊಯ್ಲು, ಗದ್ದೆಗೆ ಗೊಬ್ಬರ, ಕಟ್ಟಿಗೆ ಕದಿಯುವುದು ಇತ್ಯಾದಿ. ಇಂತಹ ಕೆಲಸದ ಸಮಯದಲ್ಲೇ ಮಳೆಯ ಕಾಟ! ನಾವೆಲ್ಲಾ ಒದ್ದದುವುದನ್ನು ನೋಡಿಕೊಂಡು ಹೇಗಿರುತ್ತಾರೆ? ಕೊನೆಗೆ ಹುರುಳಿ, ಎಳ್ಳು ಉದ್ದು ಕೀಳುವ ನೆಪದಲ್ಲಾದರೂ ಗದ್ದೆ ಕಡೆ ಬಂದೆ ಬರುತ್ತಾರೆ.
  ಹೇಗೋ ದೇವರ ದಯೆಯಿಂದ ಸುಧಾರಿಸುತಿದ್ದಾರೆ.
  ನಿಮ್ಮ ಮಾಹಿತಿಪೂರ್ಣ ಪ್ರತಿಕ್ರಿಯೆಗೆ ದನ್ಯವಾದಗಳು.

  ReplyDelete